ಪ್ರವೀಣ್ ಕುಮಾರ್ ಮಾವಿನಕಾಡು ಅವರು ಹೊಸ ದಿಗಂತ ದಿನಪತ್ರಿಕೆಯಲ್ಲಿ ಬರೆದ ಹುಳಿಮಾವು ಅಂಕಣದ ಆಯ್ದ ಬರಹಗಳ ಸಂಗ್ರಹ ಈ ಕೃತಿ. ಮಾವಿನಕಾಡು ಅವರ ವಿಶಿಷ್ಟ ವ್ಯಂಗ್ಯ, ಹಾಸ್ಯಪ್ರವೃತ್ತಿಯನ್ನು ಈ ಪುಸ್ತಕದ ಉದ್ದಕ್ಕೂ ನೋಡಬಹುದು. ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವವರ ವೈಚಾರಿಕ ಶೂನ್ಯವನ್ನು ಎತ್ತಿತೋರಿಸುವ ಬರಹಗಳು ಇವು. ಅವರ ವಾದಗಳನ್ನೇ ಬಳಸಿಕೊಂಡು, ಆ ವಾದಗಳು ಯಾಕೆ ತರ್ಕಬದ್ಧವಾಗಿಲ್ಲ ಎಂದು ತೋರಿಸುತ್ತ, ವಿಚಾರವಾದಿಗಳ ದೊಡ್ಡ ದೊಡ್ಡ ಪ್ರಭಾವಳಿಯನ್ನೆಲ್ಲ ಕಿತ್ತೆಸೆಯುವಂಥ ಹರಿತವಾದ ಯೋಚನಾಲಹರಿ ಈ ಎಲ್ಲ ಬರಹಗಳ ವಿಶೇಷ ಅಂಶ. ಸೆಕ್ಯುಲರ್ವಾದಿಗಳ ಸುಳ್ಳು ಸಂಕಥನಗಳನ್ನು ಒಡೆಯುವ ದಾರಿಯಲ್ಲಿ ಓಪನ್ ಚಾಲೆಂಜ್ ಒಂದು ದೃಢ ಹೆಜ್ಜೆ.