Skip to product information
1 of 1

Ayodhya Publications Pvt Ltd

Ota Benga

Ota Benga

Regular price Rs. 180.00
Regular price Sale price Rs. 180.00
Sale Sold out

Language version

ಓಟಾ ಬೆಂಗ
ಇದು ಹಲವು ವ್ಯಕ್ತಿಚಿತ್ರಗಳ ಸಂಗ್ರಹ. ಕೇವಲ ಸರಕಾರದ ಅತ್ಯಾಸೆಗಾಗಿ ಆಕಾಶಕ್ಕೆ ಹಾರಲು ಸಿದ್ಧನಾಗಬೇಕಾದ ಅಮಾಯಕ ಗಗನಯಾನಿಯ ಕತೆ, ತಮ್ಮ ದೇಶದ ಘನತೆ ಹೆಚ್ಚಿಸಿಕೊಳ್ಳಲು ನಾಯಿಯೊಂದನ್ನು ರಾಕೆಟ್ಟಿನಲ್ಲಿ ಅಂತರಿಕ್ಷಕ್ಕೆ ಕಳಿಸಿದ ಕತೆ, ಕಾಡಿನಲ್ಲಿ ತನ್ನ ಪಾಡಿಗೆ ತಾನಿದ್ದ ಹುಡುಗನನ್ನು ನಗರಕ್ಕೆ ಕರೆತಂದು ಪ್ರದರ್ಶನದ ಗೊಂಬೆಯಾಗಿಸಿ ಕಾಸುಮಾಡಿಕೊಂಡವರ ಕತೆ, ರೋಗಿಗಳನ್ನು ಪರೀಕ್ಷಿಸುವ ಮೊದಲು ವೈದ್ಯರು ಕೈತೊಳೆದಿರಬೇಕೆಂದ ವೈದ್ಯನೇ ಕೊನೆಗೆ ಕಣ್ಣೀರಿನಲ್ಲಿ ಕೈತೊಳೆಯಬೇಕಾದ ಕತೆ - ಹೀಗೆ ಹಲವು ವಿಚಿತ್ರ, ನೋವಿನ ಕತೆಗಳು ಇಲ್ಲಿವೆ. ಇಲ್ಲಿ ತನ್ನ ಏಳು ವರ್ಷಗಳ ಜೀವನವನ್ನು ಸಾಧನೆಯಿಂದ ಸಾರ್ಥಕಗೊಳಿಸಿಕೊಂಡ ಪುಟ್ಟಬಾಲಕನಿದ್ದಾನೆ, ಅರ್ಧ ತಾಸಿನ ಪ್ರಯೋಗಕ್ಕಾಗಿ ಹನ್ನೊಂದು ವರ್ಷಗಳನ್ನು ಪರದೇಶಿ ನೆಲದಲ್ಲಿ ದೈನೇಸಿಯಾಗಿ ಕಳೆದ ಖಗೋಳಜ್ಞ ಇದ್ದಾನೆ. ಬದುಕಿನ ವೈಚಿತ್ರ್ಯಗಳನ್ನು ಈ ಕೃತಿ ಸಶಕ್ತವಾಗಿ ಅನಾವರಣ ಮಾಡುತ್ತದೆ.

View full details

Other Details

Details Value
Author(s) Rohith Chakrathirtha
Hard_Paperback Paperback
ISBN 978-81-948893-9-7
Publication Ayodhya Publications Pvt Ltd
Size 5.5" X 8.5"
Pages 144