ಇದುವರೆಗೆ ೬೦ಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿರುವ, ವೃತ್ತಿಯಲ್ಲಿ ಉದ್ಯಮಿ ಮತ್ತು ಬ್ಯಾಂಕಿಂಗ್ ಕ್ಷೇತ್ರ ಪರಿಣಿತ ಆಗಿರುವ ರಂಗಸ್ವಾಮಿ ಮೂಕನಹಳ್ಳಿ, ತಾವು ಸಂದರ್ಶಿಸಿದ ಹತ್ತು ದೇಶಗಳ ಬಗ್ಗೆ ಈ ಕೃತಿಯಲ್ಲಿ ವಿವರವಾಗಿ ಬರೆದಿದ್ದಾರೆ. ಪ್ರತಿ ದೇಶದ ಜನಜೀವನ, ಸಂಸ್ಕೃತಿ, ಆಹಾರಪದ್ಧತಿ, ಪ್ರೇಕ್ಷಣೀಯ ಸ್ಥಳಗಳು, ಶಿಷ್ಟಾಚಾರಗಳು, ಇತಿಹಾಸ ಮುಂತಾದ ಹಲವು ವಿಷಯಗಳ ವರ್ಣರಂಜಿತ ಪರಿಚಯ, ಪ್ರತಿ ಪುಟದಲ್ಲೂ ಅನನ್ಯ ಮಾಹಿತಿ, ಕೂತಲ್ಲೇ ಜಗತ್ತು ತೋರಿಸುವ ಅತ್ಯಾಕರ್ಷಕ ವಿಡಿಯೋಗಳು, ಪ್ರವಾಸ ಹೋಗುವಾಗ ಪೂರ್ವಸಿದ್ಧತೆ ಹೇಗಿರಬೇಕು ಎಂಬ ಸಲಹೆ, ಗೂಗಲ್ ದೇವರು ಕೊಡದ ಅಪರೂಪದ ಮಾಹಿತಿಗಳು.. ಮುಂತಾದ ಹಲವು ಸಂಗತಿಗಳು ತುಂಬಿರುವ ಪ್ರವಾಸ ಕಥನ ಇದು. ಸ್ಪೇನ್, ಪೋರ್ಚುಗಲ್, ಅಂದೋರಾ, ಲಿಚನ್‌ಸ್ಟೈ ನ್ , ಸ್ವಿಝರ್‌ಲ್ಯಾಂಡ್‌ನಂಥ ಯುರೋಪಿಯನ್ ದೇಶಗಳು, ಯುಎಇ ಎಂಬ ಮರಳುಗಾಡಿನ ಅಚ್ಚರಿ, ಮಲೇಷ್ಯ, ಶ್ರೀಲಂಕಾದಂಥ ಏಷ್ಯನ್ ದೇಶಗಳು - ಈ ಕೃತಿಯಲ್ಲಿ ಜಾಗ ಪಡೆದಿವೆ.
ಒಂದು ಉತ್ತಮವಾದ ಪುಸ್ತಕ.ಲೇಖಕರ ಸಾಕಷ್ಟು ಕಾರ್ಯಕ್ರಮಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ನೋಡಿದ್ದೇನೆ. ನನಗೆ ಪ್ರವಾಸ ಲೇಖನಗಳಲ್ಲಿ ವಿಶೇಷ ಆಸಕ್ತಿ.ಅವರ ನಿರೂಪಣೆಯಲ್ಲಿ ನನಗೆ ನನ್ನ ನೆಚ್ಚಿನ ಲೇಖಕರಾದ ದಿವಂಗತ ಹಾಲ್ದೊಡ್ಡೇರಿ ಸುಧೀಂದ್ರ ರವರು ನೆನಪಿಗೆ ಬಂದರು. ಒಂದು ಒಳ್ಳೆಯ ಕನ್ನಡ ಪುಸ್ತಕ ನೀಡಿರುವುದಕ್ಕೆ ಧನ್ಯವಾದಗಳು.
Choosing a selection results in a full page refresh.
Opens in a new window.
✓
You're on the list!
We'll email you when this item is back in stock.
Notify me when available
Enter your email and we'll let you know when this item is back in stock.