Ayodhya Publications Pvt Ltd
Ragabharathi (Volume 1 & 2)
Ragabharathi (Volume 1 & 2)
Couldn't load pickup availability
ನಾಡಿನ ಬಹುಶ್ರುತ ಕವಿ-ವಿದ್ವಾಂಸರೂ ಏಕೈಕ ಶತಾವಧಾನಿಗಳೂ ಆದ ಡಾ|| ಆರ್. ಗಣೇಶ್ ಅವರ ಷಷ್ಟ್ಯಬ್ದಪರ‍್ತಿಯ ಸುಸಂರ‍್ಭದಲ್ಲಿ ಅವರ ಪ್ರಾತಿನಿಧಿಕ ಕನ್ನಡ ಬರೆಹಗಳ ಸಂಚಯ ‘ರಾಗಭಾರತೀ’ ಪ್ರಕಟವಾಗುತ್ತಿದೆ. ಎರಡು ಸಂಪುಟಗಳಲ್ಲಿ ವಿಭಕ್ತವಾಗಿರುವ ಈ ಹೊತ್ತಗೆಯಲ್ಲಿ ಕವಿತೆ, ಕಥೆ, ಕಾದಂಬರಿ, ಲಲಿತ ಪ್ರಬಂಧ, ವ್ಯಕ್ತಿಚಿತ್ರ, ಕಲೆ, ಕನ್ನಡಸಾಹಿತ್ಯ, ಅವಧಾನ, ಸಂಸ್ಕೃತಸಾಹಿತ್ಯ, ಕಾವ್ಯಮೀಮಾಂಸೆ, ಛಂದಃಶಾಸ್ತ್ರ, ಅಧ್ಯಾತ್ಮ-ಸಂಸ್ಕೃತಿ-ಮೌಲ್ಯಮೀಮಾಂಸೆ ಮತ್ತು ಪುರಾಣ-ಇತಿಹಾಸ ಎಂಬ ಪ್ರಕಾರ-ವಿಷಯಗಳಿಗೆ ಸಂಬಂಧಿಸಿದ ಬರೆಹಗಳಿವೆ. ಈ ಎಲ್ಲ ಜ್ಞಾನಶಾಖೆಗಳ ತತ್ತ್ವ ಮತ್ತು ಪ್ರಯೋಗಗಳಲ್ಲಿ ನುರಿತವರಾದ ಗಣೇಶರ ಲೇಖನಗಳು ಭಾರತೀಯ ಸಂಸ್ಕೃತಿಯ ಬಗೆಗೆ ಆದರ-ಆಸಕ್ತಿಗಳು ಹೆಚ್ಚಾಗಿ ಮೂಡುತ್ತಿರುವ ನಮ್ಮೀ ಕಾಲದಲ್ಲಿ ಅಧಿಕೃತವಾದ ಮಾಹಿತಿಯನ್ನೂ ಎಲ್ಲರೂ ನಚ್ಚಬಹುದಾದ ಪರಿಪ್ರೇಕ್ಷೆ ಮತ್ತು ಒಳನೋಟಗಳನ್ನೂ ಒದಗಿಸಿ ಮರ‍್ಗರ‍್ಶನ ಮಾಡಬಲ್ಲುವು. ಇಲ್ಲಿಯ ಪುಟಗಳನ್ನು ತಿರುವಿಹಾಕುತ್ತಿದ್ದಂತೆ ನಮ್ಮ ಪಾರಂಪರಿಕ ಮೌಲ್ಯಗಳ ಬಗೆಗೆ ಯುಕ್ತವಾದ ಹೆಮ್ಮೆ ಮೂಡುತ್ತದೆ; ಇವುಗಳ ಅನುಸಂಧಾನದ ಮೂಲಕ ನಮ್ಮ ಜೀವನ ಎಷ್ಟು ಹಸನಾಗಬಲ್ಲುದೆಂಬ ಅರಿವೂ ಅಂಕುರಿಸುತ್ತದೆ.
Other Details
Details | Value |
---|---|
Hard_Paperback | Hardback |
ISBN | 9788196584160 |
Publication | Ayodhya Foundation |
Edited By | Sahihikiran |
Size | 1/4th Crown (Coffee table book Size) |
Pages | 1036 |

