ಕರ್ಮಯೋಗವನ್ನು ರಾಷ್ಟ್ರನಿರ್ಮಾಣದೆಡೆಗೆ ಪ್ರವಹಿಸುವಂತೆ ಮಾಡಿದವರಲ್ಲಿ ಡಾ.ಕೇಶವ ಬಲಿರಾಂ ಹೆಡಗೇವಾರರು ಪ್ರಮುಖರು. ಪ್ರೇಮದಿಂದಲೂ, ಗೌರವದಿಂದಲೂ ಜನ ಅವರನ್ನು ಕರೆದದ್ದು ಡಾಕ್ಟರ್‌ಜೀ ಎಂದು. ಸಂಘಟನೆಯ ಶಕ್ತಿ ನಿಸ್ವಾರ್ಥವಾದಾಗ ಏನೆಲ್ಲ ಧನಾತ್ಮಕ ಪರಿಣಾಮ ಸಮಾಜದಲ್ಲಿ ಉಂಟಾಗಬಹುದು ಎಂಬುದಕ್ಕೆ ಡಾಕ್ಟರ್‌ಜೀ ದೂರದೃಷ್ಟಿಯೇ ಉದಾಹರಣೆ.
ಮನುಷ್ಯ ತನ್ನ ಕಣ್ಣಿಗೆ ಕಾಣುವ ಸಂಗತಿಗಳಿಂದ ಪ್ರೇರಿತನಾಗಿ ಯೋಚನೆ ಮಾಡುತ್ತಾನೆಯೇ ಹೊರತು ಹೊಸತಾಗಿ ಏನನ್ನೂ ಯೋಚಿಸಲಾರ. ಆದರೆ ಸಂಘದಂತಹ ಸಂಘಟನೆ 1925ಕ್ಕೂ ಮುಂಚೆ ಎಲ್ಲೂ ಇರಲಿಲ್ಲ. ಡಾಕ್ಟರ್‌ಜೀ ಸಂಘ ಸ್ಥಾಪನೆಯ ಕನಸು ಕಂಡಿದ್ದಾರೆ ಎಂದರೆ ಅದೊಂದು ಅಪ್ರತಿಮ ಸೃಷ್ಟಿ. ಆ ಕಾರಣದಿಂದಲೇ "ಸಂಘ ಸ್ಥಾಪನೆ ದೈವ ಸಂಕಲ್ಪ ಹಾಗೂ ಸಂಘದ ಕಾರ್ಯ ದೈವ ಕಾರ್ಯ" ಎನ್ನುವುದು.
ಸಂಘಕಾರ್ಯವನ್ನೇ ಜೀವನಕಾರ್ಯವನ್ನಾಗಿಸಿಕೊಂಡಿದ್ದ ಡಾಕ್ಟರ್‌ಜೀ ಬೈಠಕ್‌ಗಳಲ್ಲಿ, ಭಾಷಣಗಳಲ್ಲಿ ಹೇಳಿದ ಅಂಶಗಳು ಪುಸ್ತಕ ರೂಪದಲ್ಲಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಮತ್ತು ತೊಡಲಿರುವವರಿಗೆ ಈ ಕೃತಿಯು ಪ್ರೇರಣಾದಾಯಿ.