ಒಡೆದು ಆಳುವುದು ವಿದೇಶೀಯರ ನೀತಿ. ನಮಗೆ ವಿಶ್ವವೇ ಪರಿವಾರದ ರೀತಿ. ಕೆಲವರಿಗೆ ಎದ್ದು ಬಂದ ಹೊಸ ವಿಚಾರಗಳೆಲ್ಲವೂ ಪ್ರೊಟೆಸ್ಟೆಂಟ್; ಇನ್ನು ಕೆಲವರಿಗೆ ಎಲ್ಲವೂ ಕೆಂಪು ಕ್ರಾಂತಿ. ಈ ಎರಡೂ ಕೂಡ ದಾರಿ ತಪ್ಪಿಸುತ್ತವೆ. ನಾವು ಬಿಡಲೇ ಬಾರದ ದಾರಿ ಸಮನ್ವಯ. ಬುದ್ಧ ಮತ್ತು ವಿವೇಕಾನಂದರನ್ನು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಲ್ಲಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆದಿದೆ. ಇಬ್ಬರು ಮಹಾನ್ ವ್ಯಕ್ತಿಗಳನ್ನು ಹೋಲಿಸುವುದಲ್ಲ, ಬದಲಾಗಿ ಅವರಲ್ಲಿಯ ಸಾಮ್ಯವನ್ನು ಓದುಗರ ಮುಂದಿಡುವ ಪ್ರಯತ್ನ ಈ ಪುಸ್ತಕದಲ್ಲಿದೆ. ವೈಯಕ್ತಿಕ ಬದುಕನ್ನು ಬದಿಗಿಟ್ಟು, ಸಮಾಜ ಉದ್ಧಾರದ ದಾರಿ ಹಿಡಿದ ಈರ್ವರ ಬದುಕು ಮತ್ತು ಅವರು ನೀಡಿದ ಸಂದೇಶಗಳು ಬದುಕಿಗೆ ದಾರಿದೀಪಗಳಾಗಿವೆ. - ‘ಅನುವಾದಕನ ಅರಿಕೆ'ಯಿಂದ