ತನ್ನತನವನ್ನು ಸೂಚಿಸುವ `ಸ್ವ'ತ್ವ ಪದವು ಬಹುತೇಕರಿಗೆ ಅಪರಿಚಿತ. ಸ್ವದೇಶೀ, ಸ್ವಭಾಷಾ, ಸ್ವಭೂಷಾ, ಸ್ವಭಾವ, ಸ್ವಗುಣ ಇತ್ಯಾದಿ ಹಲವು ಪದಗಳ ಪ್ರಾರಂಭದ ಉಪಸರ್ಗವಾಗಿ ಇರುವುದು ‘ಸ್ವ'. ನಮ್ಮ ಸಾಹಿತ್ಯದ ಸ್ವತ್ವವನ್ನು ಮರೆತುಬಿಡುವುದೂ ಸಲ್ಲ, ಅದನ್ನು ಹುಡುಕಾಡುವ ನಿಟ್ಟಿನಲ್ಲಿ ಪರಕೀಯ ನೆಲದ ಸಾಹಿತ್ಯದ ಮೊರೆಹೋಗುವುದೂ ಸಲ್ಲ ಮತ್ತು ಇದೇ ನಿಟ್ಟಿನಲ್ಲಿ ನಮ್ಮ ನೆಲದ ನಂಟಿನಿAದ ಕಳಚಿಕೊಳ್ಳುವುದೂ ಸಲ್ಲ.