ಸಾಮಾನ್ಯರಿಗೆ ಸಾಮಾನ್ಯವೆಂದು ಕಾಣುವ ಸಂಗತಿಯಲ್ಲಿ ವಿಶೇಷವಾದ್ದನ್ನು ಗಮನಿಸುವುದೇ ಸಂಶೋಧನೆ. ಮರದಿಂದ ಹಣ್ಣು ಕಳಚಿ ಬೀಳುವ ಸಾಮಾನ್ಯ ಪ್ರಕ್ರಿಯೆ ವಿಜ್ಞಾನಿಯೊಬ್ಬನಿಗೆ ಗುರುತ್ವದ ಬಗ್ಗೆ ಯೋಚಿಸಲು ಪ್ರೇರಣೆ ನೀಡಿತ್ತು. ಹಾಗೆ ಪ್ರೇರಣೆ ಹುಟ್ಟಬೇಕಾದರೆ ವ್ಯಕ್ತಿಯಲ್ಲಿ ಸಂಶೋಧನೆ ಪ್ರಜ್ಞೆ ಜಾಗ್ರತಾವಸ್ಥೆಯಲ್ಲಿ ಇರಬೇಕಾಗುತ್ತದೆ. ಸಂಶೋಧನೆ ಎಂದರೇನು, ವಸ್ತುವನ್ನು ಆರಿಸಿಕೊಳ್ಳುವುದು ಹೇಗೆ, ಸಂಶೋಧನೆಯ ವಿಧಾನಗಳು ಏನೇನು, ಅದರಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದು ಹೇಗೆ, ಮಾಡಿದ ಸಂಶೋಧನೆ/ ಪ್ರಮೇಯಗಳ ದಾಖಲಾತಿ ಹೇಗೆ, ಸಂಶೋಧನ ಪ್ರಬಂಧವನ್ನು ಅಕಾಡೆಮಿಕ್ ಶೈಲಿಯಲ್ಲಿ ಬರೆಯುವುದು ಹೇಗೆ- ಇತ್ಯಾದಿ ಮಾರ್ಗಸೂಚಿಗಳನ್ನು ಕೊಟ್ಟು ಸಂಶೋಧನೆಯ ದಾರಿಯ ಪಥಿಕರಿಗೆ ಕೈಪಿಡಿಯಾಗಬಲ್ಲ ಕೃತಿ- ಸಂಶೋಧಕ ರಾಜ ಮಾರ್ಗ.
ಇದನ್ನು ಬರೆದವರು ಸಂಶೋಧನೆಯ ಕ್ಷೇತ್ರದಲ್ಲೆ ಹಲವು ವರ್ಷಗಳ ಅನುಭವವಿರುವ ಹಿರಿಯ ಚಿಂತಕ ಡಾ|| ಅಜಕ್ಕಳ ಗಿರೀಶ್ ಭಟ್.