ಹಿಂದೂ ಸಂಸ್ಕೃತಿಯಲ್ಲಿ ೧೬ ಸಂಸ್ಕಾರಗಳ ವಿಚಾರ ಪ್ರಸಿದ್ಧವಾಗಿದೆ. ಮೇಲ್ನೋಟಕ್ಕೆ ಕೇವಲ ಆಚರಣೆಯಾಗಿ ಕಂಡರೂ ಈ ಸಂಸ್ಕಾರಗಳ ಹಿಂದೆ ಗಹನವಾದ ಅರ್ಥವಿದೆ. ಆದರೆ ಅರ್ಥವರಿಯದೆ ಕೇವಲ ಆಚರಣೆಯನ್ನಷ್ಟೇ ಉಳಿಸಿಕೊಂಡ ಫಲವಾಗಿ ಇಂದು ನಮಗೆ ಅನೇಕ ಪದ್ಧತಿಗಳು, ಸಂಸ್ಕಾರಗಳು ಮೌಢ್ಯ ಎನ್ನಿಸಬಹುದು. ಹಾಗಾದರೆ ಸಂಸ್ಕಾರಗಳ ಹಿಂದಿನ ಗಹನಾರ್ಥವನ್ನು ಅರ್ಥೈಸಿಕೊಳ್ಳುವ ಬಗೆ ಹೇಗೆ? ನಾರಾಯಣ ಶೇವಿರೆ ಬರೆದ "ಸಂಸ್ಕಾರಸಂಪದ" ಮುಖ್ಯವಾಗಿ ಆಚರಣೆಗಳ ಹಿಂದಿನ ತಾತ್ತ್ವಿಕ ಚಿಂತನೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಎಲ್ಲ ಸಂಸ್ಕಾರಗಳ ಗಣಿಯಾಗಿದ್ದ ಶ್ರೀರಾಮನ ವ್ಯಕ್ತಿತ್ವದ ವಿಶ್ಲೇಷಣೆಯೂ ಈ ಕೃತಿಯಲ್ಲಿದೆ.