ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಅನಂತರದ ದಿನಗಳಲ್ಲಿ ನೆಹರು ಮತ್ತು ಅವರ ಉತ್ತರಾಧಿಕಾರಿಗಳ ಅವಧಿಯಲ್ಲಿ ಹಲವು ಬಾರಿ ಬದಲಾವಣೆಗೆ ಒಳಗಾಯಿತು. ಸಂವಿಧಾನವನ್ನು ಮನಸ್ಸಿಗೆ ಬಂದಂತೆ ಬದಲಾಯಿಸುವ ಕೆಲಸವೂ ನಡೆಯಿತು. ಆದರೆ ಇಂದು, ಸಂವಿಧಾನವನ್ನು ರಕ್ಷಿಸುವ ಹೊಣೆ ಹೊತ್ತ ಸರಕಾರ ಮತ್ತು ವ್ಯಕ್ತಿಗಳ ಮೇಲೆಯೇ 'ಸಂವಿಧಾನದ ಕೊಲೆಗಾರರು' ಎಂಬ ನರೇಟಿವ್ ಕಟ್ಟಲಾಗುತ್ತಿದೆ. ಸಂವಿಧಾನವನ್ನು ಬರೆದ ಡಾ. ಅಂಬೇಡ್ಕರರ ಆಶಯಗಳೇನಿತ್ತು? ಅವರು ಸಂಸತ್ತಿನಲ್ಲಿ ಮಾಡಿದ ಭಾಷಣಗಳ ಪೂರ್ಣಪಾಠ ಏನು? ಸಂವಿಧಾನ ರಚನೆಯ ಪ್ರಕ್ರಿಯೆ ಹೇಗಿತ್ತು? ಬಾಬಾಸಾಹೇಬರನ್ನು ಯಾವ್ಯಾವ ರೀತಿಯಲ್ಲಿ ದಮನಿಸಲು ಪ್ರಯತ್ನಿಸಲಾಯಿತು? ಸಂವಿಧಾನದ ತಿದ್ದುಪಡಿಯ ಹೆಸರಿನಲ್ಲಿ ಏನೇನು ಅಜೆಂಡಗಳನ್ನು ತುರುಕಲಾಯಿತು? ಬಾಬಾಸಾಹೇಬರ ಆಶಯವನ್ನು ರಕ್ಷಿಸುವ ಬಗೆ ಹೇಗೆ? - ಈ ಎಲ್ಲ ವಿಚಾರಗಳನ್ನು ಅತ್ಯಂತ ಸ್ಪಷ್ಟವಾಗಿ, ಅಧ್ಯಯನಪೂರ್ಣವಾಗಿ, ವಿಸ್ತೃತವಾಗಿ ಕಟ್ಟಿಕೊಟ್ಟಿರುವ ಕೃತಿಯೇ 'ಸಂವಿಧಾನ ಬದಲಾಯಿಸಿದ್ದು ಯಾರು?'. ಸಂವಿಧಾನರಚನೆಯ ವಜ್ರಮಹೋತ್ಸವ ಸಂದರ್ಭದಲ್ಲಿ ಇದು ಬಾಬಾಸಾಹೇಬ್ ಡಾ. ಅಂಬೇಡ್ಕರರ ವ್ಯಕ್ತಿತ್ವ-ಸಾಧನೆಗಳಿಗೆ ಅರ್ಪಿಸಿರುವ ಸಾರ್ಥಕ ಕೃತಿಯಾಗಿದೆ.