'ಸಂಚಾರ - ಇದು ಒಳಗಿನ ಪಯಣ' ಪುಸ್ತಕವು ನಮ್ಮನಿಮ್ಮ ಜೀವನಗಳಲ್ಲಿ ದಿನನಿತ್ಯ ನಡೆಯುವ, ಆದರೆ ನಮ್ಮ ಗಮನಕ್ಕೆ ಬರದೆ ಮರೆಯಾಗುವ ಹತ್ತುಹಲವು ಕುತೂಹಲಕಾರಿ ಘಟನೆಗಳನ್ನು ಮುಂದಿಟ್ಟು ಜೀವನಪಾಠ ಕಲಿಸುವ ಸುಂದರ ಹೊತ್ತಗೆ. ಜೀವನಮೌಲ್ಯಗಳ ಪಾಠವನ್ನು ಹೀಗೂ ಮಾಡಬಹುದೆಂಬ ಅತ್ಯುತ್ತಮ ಮಾದರಿ; ಪಾಠಪುಸ್ತಕವಾಗಬೇಕಾದ ರಸಪೂರ್ಣ ಬದುಕಿನ ಬುತ್ತಿ.