ಭಾರತವೆಂಬ ಬೆಳಕನ್ನು ಜಗಕೆ ತೋರಿದ ಶ್ರೀ ಧರಂಪಾಲ್ - ಡಾ. ರೋಹಿಣಾಕ್ಷ ಶಿರ್ಲಾಲು
ಭಾರತದ ಬಗ್ಗೆ ಬ್ರಿಟಿಷರು ತಮ್ಮ ಕಡತಗಳಲ್ಲಿ ಬರೆಯುತ್ತಿದ್ದ ಇತಿಹಾಸಾಂಶಗಳೇ ಬೇರೆ, ಇಲ್ಲಿನವರು ಓದಲೆಂದು ಪುಸ್ತಕಗಳನ್ನು ಪ್ರಕಟಿಸುವಾಗ ಆ ಪುಟಗಳಲ್ಲಿ ತುಂಬುತ್ತಿದ್ದ ವಿವರಗಳೇ ಬೇರೆ. ಈ ಸತ್ಯವನ್ನು ಮೊದಲ ಬಾರಿಗೆ ಗುರುತಿಸಿದವರು ಇತಿಹಾಸ ಸಂಶೋಧಕ ಧರಂಪಾಲ್. ವಿಜ್ಞಾನ, ತಂತ್ರಜ್ಞಾನ, ರಾಜಕೀಯ, ಆಡಳಿತ, ಇಂಜಿನಿಯರಿಂಗ್, ಕಾನೂನು ಸುವ್ಯವಸ್ಥೆ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಪ್ರಾಚೀನ ಮತ್ತು ಮಧ್ಯಯುಗೀನ ಭಾರತ ಹೇಗಿತ್ತು ಎಂಬುದನ್ನು ಬ್ರಿಟಿಷ್ ಕಡತಗಳ ಮೂಲಕವೇ ಸಂಶೋಧಿಸಿ ಭಾರತೀಯರ ಕಣ್ತೆರೆಸಿದ ಧರಂಪಾಲ್, ತಥಾಕಥಿತ ಇತಿಹಾಸಕಾರರು ಕಟ್ಟುತ್ತಿದ್ದ ಹಲವಾರು ಖೊಟ್ಟಿ ಸಿದ್ಧಾಂತಗಳನ್ನೆಲ್ಲ ಹೊಡೆದುರುಳಿಸಿದರು. ಅವರ ಜೀವನ-ಸಾಧನೆಯ ಆಳವಾದ ಪರಿಚಯ ಮತ್ತು ವಿಶ್ಲೇಷಣೆ ಈ ಕೃತಿಯಲ್ಲಿದೆ. ಹಿರಿಯ ಇತಿಹಾಸಜ್ಞ ಪ್ರೊ. ಜೆ. ಎಸ್. ಸದಾನಂದ ಮುನ್ನುಡಿ ಬರೆದಿದ್ದಾರೆ.