ಶ್ರೀಚಕ್ರ ಪೂಜೆ ಆಧ್ಯಾತ್ಮ ಸಾಧನೆಯ ರಾಜಮಾರ್ಗ. ಇದು ತಂತ್ರ ಸಾಧನೆಯ ಮುಕುಟ. ಶ್ರೀಚಕ್ರ ಸಕಲ ಯಂತ್ರಗಳ ರಾಜ. ಇದರೊಳಗೆ ವ್ಯಷ್ಟಿ-ಸಮಷ್ಟಿಗಳೆರಡೂ ಸಂಸಿವೆ. ಜಗನ್ಮಾತೆಯು ಇದರೊಳಗೆ ನೆಲೆನಿಂತಿರುತ್ತಾಳೆ. ಆತ್ಮ-ಸಾಕ್ಷಾತ್ಕಾರಕ್ಕೆ ಇದು ಶ್ರೇಷ್ಠ ಪೂಜೆಯಾಗಿದೆ.
ಸ್ವಾಮಿ ಶಾಂತಿಧರ್ಮಾನಂದ ಸರಸ್ವತೀ ಅವರು ಹಿಮಾಲಯವಾಸಿ ತಪಸ್ವಿಗಳು. ಶ್ರೀಚಕ್ರ ಆರಾಧಕರು ಹಾಗೂ ಬೋಧಕರು. ಇವರು ತಮ್ಮ ಸಾಧನಾನುಭವ ಹಾಗೂ ಜ್ಞಾನವ್ಯಾಪ್ತಿಯನ್ನು ಇದರಲ್ಲಿ ಧಾರಾಳವಾಗಿ ದಾಖಲಿಸಿದ್ದಾರೆ. ಭಕ್ತಿ-ಯುಕ್ತಿ ಇವೆರಡೂ ಪ್ರಸ್ತುತ ಗ್ರಂಥದಲ್ಲಿ ಮೇಳೈಸಿವೆ. ಇಲ್ಲಿರುವ ವಿವರಗಳು ಇನ್ನೆಲ್ಲೂ ಸಿಗದು. ಎಂದರೆ ಇದರ ಹೊರತು ಶ್ರೀಚಕ್ರ ಆರಾಧನೆಗೆ ಬೇರಾವ ವಿವರಗಳೂ ಇಲ್ಲ. ಪೂಜೆಗೆ ಸಂಬಂಸಿದ ಅತಿ ಚಿಕ್ಕ ವಿವರಗಳೂ, ಮಂತ್ರಗಳೂ ಇಲ್ಲಿವೆ. ನ್ಯಾಸ, ಮುದ್ರೆ, ಧ್ಯಾನ, ಆವಾಹನ ಪ್ರತಿಯೊಂದೂ ಶಾಸಾ್ತ್ರನುಸಾರ ವಿವರಿಸಿದ್ದಾರೆ.
ಈ ಪುಸ್ತಕವು ಪಂಡಿತ-ಪಾಮರರಿಗೆಲ್ಲ ಆಧಾರ ಗ್ರಂಥವಾಗಿದೆ ಎಂಬುದು ಸಿದ್ಧ. ತಂತ್ರ ಹಾಗೂ ಶ್ರೀವಿದ್ಯೆಯ ಸಾಧಕರಿಗೆ ಇದೊಂದು ಅನನ್ಯ ಕೈಪಿಡಿ. ಸ್ವಾಮಿಗಳು ಸಾಧಕರು ಅನುಮಾನ ಪಡುವ ಸ್ಥಳಗಳಲ್ಲಿ ಧಾರಾಳ ವಿವರಗಳನ್ನು ನೀಡಿದ್ದಾರೆ. ಒಂದು ಬಗೆಯಲ್ಲಿ ಕೈ-ಹಿಡಿದು ಮುನ್ನಡೆಸುವಂತೆ ಈ ಗ್ರಂಥ ರಚನೆಯಾಗಿದೆ. ಪುಸ್ತಕದಲ್ಲಿನ ಯಂತ್ರಗಳ, ಮುದ್ರೆಗಳ, ಕ್ರಿಯೆಗಳ ಚಿತ್ರಗಳು ತುಂಬ ಉಪಯುಕ್ತ ಆಗಿವೆ.
ಅಂತಃಶುದ್ಧಿ, ಬಾಹ್ಯ ಯಶಸ್ಸು ಎರಡಕ್ಕೂ ಇಲ್ಲಿ ಉಪಾಯ ಇದೆ. ಜೀವನ ಯಶಸ್ಸಿಗೆ ಇದು ಮಾರ್ಗದರ್ಶಿ ಆಗಿದೆ. ಆರಾಧನೆಗೆ ಪ್ರೇರಣೆ ನೀಡಬಲ್ಲದ್ದಾಗಿದೆ.