ತಂತ್ರ ಎಂದರೆ ಈಗಲೂ ಬುದ್ಧಿವಂತರಿಗೆ ಮಡಿ. ಅದರ ಹತ್ತಿರ ಹೋಗಲೂ ಭಯ ಮತ್ತು ದುರಹಂಕಾರ. ಇನ್ನು ಅದರ ಅರಿವು, ಉಪಾಸನೆ ದೂರದ ಮಾತು. ಈಗಲೇ ಹೀಗೆ ಎಂದರೆ ನೂರು ವರ್ಷಗಳ ಹಿಂದೆ ಹೇಗಿತ್ತು ನಮ್ಮ ದೇಶದಲ್ಲಿ ತಂತ್ರಗಳ ಪರಿಸ್ಥಿತಿ ಯೋಚಿಸಿ. ತಂತ್ರ ಗ್ರಂಥ, ತಂತ್ರ ಸಾಧನೆಗಳು ಒಂದು ಕಡೆ ಕ್ರೆöÊಸ್ತ ಮಿಶಿನರಿಗಳಿಂದ ಆಕ್ರಮಣಕ್ಕೆ, ಇನ್ನೊಂದು ಕಡೆ ಹಿಂದೂ ವಿದ್ವಾಂಸರಿAದಲೂ ಅಪಹಾಸ್ಯ-ಅನುಮಾನಕ್ಕೆ ಒಳಗಾಗಿದ್ದವು. ಆಗ ತಂತ್ರಗಳ ನೈಜ ಮಹತ್ವ ಜಾನ್ ವುಡ್ರೋಫ್ ಗಮನಕ್ಕೆ ಬಂತು. ಕಲ್ಕತ್ತಾ ಹೈ ಕೋರ್ಟಿನ ನ್ಯಾಯಾಧೀಶರಾಗಿದ್ದ ಇವರು ತಂತ್ರಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿದರು, ಸಂಸ್ಕೃತ ಕಲಿತರು. ಗುರುವಿನ ಮೂಲಕ ಸರಿಯಾದ ದೀಕ್ಷೆ ಪಡೆದರು. ಗುರುವಾಕ್ಯವನ್ನು ಇವರು ಮತ್ತು ಇವರ ಪತ್ನಿ ಅನುಸರಿಸಿ ಸಾಧನೆ ಮಾಡಿದರು. ತಂತ್ರಶಾಸ್ತçದ ಎತ್ತರದ ಹಂತವಾದ ಪೂರ್ಣಾಭೀಷೆಕ ದೀಕ್ಷೆಯನ್ನು ಎರಡು ಸಲ ಪಡೆದರು. ಅಲ್ಲದೆ ಬೌದ್ಧಿಕವಾಗಿ ತಂತ್ರವನ್ನು ಒಂದು ಶಾಸ್ತçವಾಗಿ ವಿಚಾರಪ್ರಪಂಚದಲ್ಲಿ ಸಮರ್ಥಿಸಿಕೊಂಡರು. ಅದರ ಬಗ್ಗೆ ಹಲವು ಗ್ರಂಥಗಳನ್ನು ಬರೆದರು. ಶತಮಾನ ಕಳೆದರೂ ತಂತ್ರದ ‘ಮಾನ’ ಉಳಿದಿರುವುದು ಈ ಮಹಾನುಭಾವನಿಂದ. ಯಾವುದೇ ಕನ್ನಡದ ಮಗು ತಂತ್ರ ಕುರಿತು ಓದಬೇಕಾದರೆ ಮೊದಲು ಓದಬೇಕಾದ ಪುಸ್ತಕ ನಿಮ್ಮ ಕೈಯಲ್ಲಿದೆ!