Ayodhya Publications Pvt Ltd
Thi. Nam. Shrikantaiah
Thi. Nam. Shrikantaiah
Couldn't load pickup availability
ಬೆನ್ನುಡಿ
ಯೋಗೀಶ್ ತೀರ್ಥಪುರ ಅವರ ‘ಕನ್ನಡದ ಕಲ್ಪವೃಕ್ಷ ತೀ.ನಂ.ಶ್ರೀಕAಠಯ್ಯ’ ಎಂಬ ಕೃತಿಯ ಶೀರ್ಷಿಕೆಯೇ ಹೇಳುವಂತೆ ತೀ.ನಂ.ಶ್ರೀ ಅವರು ಆಧುನಿಕ ಕನ್ನಡ ಸಾಹಿತ್ಯದ ಕಲ್ಪವೃಕ್ಷವೇ ಆಗಿದ್ದರು. ಅವರ ಬರಹಗಳಲ್ಲಿ ಒಂದಲ್ಲ ಒಂದು ಬಗೆಯ ಹೊಸತನವನ್ನು ಕಾಣಬಹುದಾಗಿದೆ. ಕನ್ನಡ ಸಾಹಿತ್ಯವನ್ನು ಹಲವು ಸಾಹಿತ್ಯ ಪ್ರಕಾರಗಳ ಮೂಲಕ ವರ್ತಮಾನದಲ್ಲಿ ಗ್ರಹಿಸಿಕೊಳ್ಳುವ ಬರಹಗಳು ಅವರದಾಗಿದ್ದವು. ಈ ಕೃತಿಯಲ್ಲಿ ತೀ.ನಂ.ಶ್ರೀಯವರ ಬದುಕು ಹಾಗೂ ಸಾಹಿತ್ಯವನ್ನು ಒಳಗೊಂಡAತೆ ಲೇಖಕರು ನಾಲ್ಕು ಭಾಗಗಳನ್ನಾಗಿ ವಿಭಾಗಿಸಿಕೊಂಡು ಅವರ ಸಮಗ್ರ ಸಾಹಿತ್ಯದ ಇಣುಕುನೋಟವನ್ನು ಮಾಡಿಸಿದ್ದಾರೆ. ಸಾಹಿತ್ಯದ ಮೇರು ಪ್ರತಿಮೆಯಾದ ತೀ.ನಂ.ಶ್ರೀಯವರ ವ್ಯಕ್ತಿತ್ವ ಮತ್ತು ಸಾಹಿತ್ಯದ ಸಮಗ್ರತೆಯನ್ನು ದರ್ಶಿಸಿದ್ದಾರೆ.
ತೀ.ನಂ.ಶ್ರೀಯವರ ಸಾಹಿತ್ಯ ಕಾರ್ಯ ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿನಂತೆ ವಚನ ಸಾಹಿತ್ಯದಿಂದ ಆರಂಭಗೊಡು ಶಾಸನ, ಭಾಷೆ, ವ್ಯಾಕರಣ, ಛಂದಸ್ಸು, ಕವಿತೆ, ಲಲಿತ ಪ್ರಬಂಧ, ವಿಮರ್ಶೆ, ಸಂಶೋಧನೆ ಹಾಗೂ ಕಾವ್ಯ ಮೀಮಾಂಸೆಯವರೆಗೆ ಹರಡಿದೆ. ವಿಸ್ತಾರವಾಗಿರುವ ಆ ಪಾಂಡಿತ್ಯದ ಪ್ರತಿಭೆಯನ್ನು ಸೂಕ್ಷö್ಮವಾಗಿ ಅಧ್ಯಯನಕ್ಕೆ ಒಳಪಡಿಸಿರುವುದು ಹಾಗೂ ಆಯಾ ವಿಷಯಗಳ ಬಗೆಗೆ ಪರಿಪೂರ್ಣವಾದ ಮಾಹಿತಿಯನ್ನು ಸೀಮಿತ ಪುಟಗಳಲ್ಲಿ ನೀಡಿರುವುದು ಬರಹಗಾರರ ಜಾಣ್ಮೆಯನ್ನು ತಿಳಿಸುತ್ತದೆ. ಕೇವಲ ಕಾವ್ಯ ಮೀಮಾಂಸೆ, ವ್ಯಾಕರಣ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಿ ಪ್ರಸ್ತುತ ನೆನೆಯುತ್ತಿರುವ ತೀ.ನಂ.ಶ್ರೀಯವರ ಬಹುಮುಖ ಪ್ರತಿಭೆಯನ್ನು ಸಾಹಿತ್ಯಾಸಕ್ತರಿಗೆ ಪರಿಚಯಿಸುವಲ್ಲಿ ಈ ಕೃತಿಯು ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಹಾಗೂ ಓದುಗ ಸಮೂಹಕ್ಕೆ ಅಮೂಲ್ಯ ಕೊಡುಗೆಯಾಗಿದೆ. ಇದೊಂದು ರೀತಿಯಲ್ಲಿ ಜೀವನ ಚರಿತ್ರೆಯಂತೆ ಕಂಡರೂ ಲೇಖಕರ ಸಂಶೋಧನಾ ಪ್ರಜ್ಞೆ ಇಲ್ಲಿ ಅನಾವರಣಗೊಂಡಿದೆ. ಹೀಗಾಗಿ, ಲೇಖಕರ ಈ ಪ್ರಯತ್ನಕ್ಕೆ ಸಾಹಿತ್ಯಾಸಕ್ತರ ಶ್ಲಾಘನೆ ಲಭಿಸಲಿ ಎಂದು ಆಶಿಸುತ್ತೇನೆ.
- ಡಾ. ಮಹೇಶ್. ಬಿ
ಕನ್ನಡ ಉಪನ್ಯಾಸಕರು
Other Details
Details | Value |
---|---|
Author(s) | Yogeesh Theerthapura |
Hard_Paperback | Paperback |
ISBN | 978-93-91852-72-6 |
Publication | Ayodhya Publications Pvt Ltd |
Size | 5.5" X 8.5" |
Pages | 132 |
