ಭಾರತೀಯ ಶಿಕ್ಷಣ, ಗುರುಕುಲ ಪದ್ಧತಿ, ಸರ್ವಾಂಗೀಣ ವ್ಯಕ್ತಿತ್ವ ವಿಕಸನ, ಸ್ತ್ರೀ ಶಿಕ್ಷಣ - ಮುಂತಾದ ಹಲವು ವಿಚಾರಗಳ ಬಗ್ಗೆ ಧ್ಯಾನಸ್ಥ ಸ್ಥಿತಿಯಲ್ಲಿ ಮಾತಾಡುವ ಬುದ್ಧಿಪ್ರಚೋದಕ ಸಾಂದ್ರ ಕೃತಿ. ಮೆಕಾಲೆ ನೀತಿಯಿಂದ ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಡೆದ ಪ್ರಹಾರದ ಬಗ್ಗೆ ಸೂಕ್ಷ್ಮವಾಗಿ ಹೇಳುತ್ತಲೇ ಇದು ಪಾಶ್ಚಾತ್ಯ ಕ್ರಮವನ್ನು ಕೈಬಿಟ್ಟು ಶುದ್ಧ ಭಾರತೀಯ ಚಿಂತನಕ್ರಮವನ್ನು ಅಳವಡಿಸಿಕೊಳ್ಳಲು ಕರೆ ಕೊಡುತ್ತದೆ.