Aanvikshiki
₹150.00
ಸುತ್ತಲಿನ ವಿದ್ಯಮಾನಗಳ ಕುರಿತು ಜನಮಾನಸದಲ್ಲಿ ಮೂಡುವ ಅಭಿಪ್ರಾಯಗಳು ಆಖ್ಯಾನ (ನೆರೇಟಿವ್) ಗಳಿಂದ ಪ್ರಭಾವಿತವಾಗುತ್ತವೆ. ಅಂತೆಯೇ ವಿದ್ಯಮಾನಗಳು ಆಖ್ಯಾನಗಳು ಹುಟ್ಟುಕೊಳ್ಳುವುದಕ್ಕೂ ಗಟ್ಟಿಯಾಗುವುದಕ್ಕೂ ಕಾರಣವಾಗುತ್ತವೆ. ಅಂತಹ ಕೆಲವು ಸಮಕಾಲೀನ ವಿಷಯಗಳ ಕುರಿತ ಆಖ್ಯಾನಗಳನ್ನು ಪರಾಮರ್ಶಿಸುವ ಪ್ರಯತ್ನವನ್ನು ’ಆನ್ವೀಕ್ಷಿಕೀ – ಸಮಕಾಲೀನ ಆಖ್ಯಾನಗಳು’ ಪುಸ್ತಕ ಮಾಡಿದೆ. ಸುರಾಜ್ಯ, ಇಸ್ಲಾಮಿನ ಅರ್ಥೈಸುವಿಕೆ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ನವಚಳವಳಿಗಳು, ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ ಈ ವಿಷಯಗಳನ್ನು ಆಖ್ಯಾನಗಳ ಹಿನ್ನೆಲೆಯಲ್ಲಿ ಲೇಖಕರು ಕೂಲಂಕುಷವಾಗಿ ವಿವಿಧ ಮಗ್ಗುಲುಗಳಿಂದ ವಿಶ್ಲೇಷಿಸಿದ್ದಾರೆ. ರೋಹಿತ್ ಚಕ್ರತೀರ್ಥ, ಡಾ ಶ್ರೀಧರನ್, ಚಂದ್ರಶೇಖರ ಜಹಗೀರ್ದಾರ್, ರೋಹಿಣಾಕ್ಷ ಶಿರ್ಲಾಲು, ಎಸ್ ಗಿರಿಜಾಶಂಕರ ಇವರಗಳು ಬರೆದ ಪ್ರಬಂಧಗಳು ಈ ಸಂಕಲನದಲ್ಲಿದ್ದು, ಆರೆಸ್ಸಸ್ ಪ್ರಚಾರಕ ಪ್ರದೀಪ ಮೈಸೂರು ಅವರು ಪುಸ್ತಕಕ್ಕೆ ಮತ್ತು ಆಖ್ಯಾನಗಳ ಪ್ರಪಂಚಕ್ಕೆ ಅರ್ಥವತ್ತಾದ ಪ್ರವೇಶಿಕೆಯನ್ನು ಬರೆದಿದ್ದಾರೆ. ಆನ್ವೀಕ್ಷಿಕೀ ಅಂದರೆ ನಿರೂಪಿತ ವಿಷಯದ ಪುನರ್ಮನನ ಎನ್ನುವ ಅರ್ಥವಿದೆ. ಪರಂಪರೆಯಲ್ಲಿ ಈ ಶಬ್ದವು ವಿಶೇಷವಾಗಿ ನ್ಯಾಯ ದರ್ಶನಕ್ಕೆ ಅನ್ವಯವಾಗುತ್ತದೆ. ರಾಜನಾಗತಕ್ಕವನು ಕಲಿಯಬೇಕಾದ ನಾಲ್ಕು ಸಂಗತಿಗಳಲ್ಲಿ ’ಆನ್ವೀಕ್ಷಿಕೀ’ ಕೂಡ ಒಂದು ಎಂದು ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಹೇಳಿದೆ. (ವಾರ್ತಾ, ತ್ರಯೀ, ದಂಡನೀತಿ – ಇವು ಉಳಿದ ಮೂರು). ಇದನ್ನು ಮನನ, ಪರಾಮರ್ಶೆ ಎಂಬ ಸಾಮಾನ್ಯ ಅರ್ಥದಲ್ಲಿ ಈ ಪುಸ್ತಕದ ಶೀರ್ಷಿಕೆಯಾಗಿ ಬಳಸಲಾಗಿದೆ.
Additional information
Weight | 150 g |
---|---|
Author(s) | |
Hard/PaperBack | |
Language | |
Publication |
Radhakrishna Holla –
ನೆರೇಟಿವ್ ಅಥವಾ ಆಖ್ಯಾನ ಎಂಬುದು ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿರುವ ಶಬ್ದ. ಒಂದು ಸಮಾಜದ ಚಿಂತನೆಯನ್ನು ಪ್ರಭಾವಿಸಬಲ್ಲ ಸದ್ಯ ಚಾಲ್ತಿಯಲ್ಲಿರುವ ಕೆಲವು ಆಖ್ಯಾನಗಳ ಬಗ್ಗೆ ಒಳ್ಳೆಯ ವಿಚಾರಮಂಡನೆ ಇದರಲ್ಲಿದೆ. ಸಮಾಜದ ಆಗುಹೋಗುಗಳ ಬಗ್ಗೆ ಕಳಕಳಿ ಇರುವ ಎಲ್ಲರೂ ಓದಬೇಕಾದ ಪುಸ್ತಕ. ವಿವಿಧ ತಜ್ಞ ಲೇಖಕರ ವಿಚಾರ ಒಂದೇ ಪುಸ್ತಕದಲ್ಲಿರುವುದು ಉತ್ತಮ ಅಂಶ.